Friday, March 23, 2012

Bibbe upkari rasvODo nattile saMsaar paDvo.

Bibbe upkari rasvODo nattile saMsaar paDvo.

SaMsaaro PaDvo, prati jeevu janthu khusheri swaagath korche parab, rukkache porno pallo nave chigrak swagath korche samayu. Chandru bhoomik ek chakkar galnu tagele nave paribramaNek vacche veLu. Hindu panchaanga start javche he disu thulen. Chandramaana yugaadi maNtaati hakka, aMchigele, MaraTaNche, kannaDaNcheK, telgaNchek he disu thulen nav Varas shuru jalleri, TamLaNche, maLayaLanche ani sudraNchek souramaana Yugaditulen nav varas shur jatta.
Amgele chandra anuguN javnu nav varus shur jalleri thaNgele suryak anugun javnu nav varas shur javche. makka anekai solve koru jaina nattil question kass maLLeri, he English calender khaNchek anuguN javnu shuru jatta moNu ....!!! thuMka gottasleri sanga !!!

AMchigele ammi monchek mast khushi pawtha, ammi aMgele sagLenkai aMchigelo, to amgelo moNu ammi appethati.sakdankai ammi laggi koronu varthati. Ek live example maLLeri ammi laggi gharchek maamu moNu appethati, maamu malleri amgele mallele bhavane astha monu malgaden he kRamu shuru kornu asthale. blood relation na nathlenK maamu, maayi, bapama monu appoche annek community khanche na ki monu. Jalle nimithi aMchigele maLLeri amgele KuTuMb maLLele bhaavane aMgele ottu meLnu gella.

AMchigele khai gelleri jigsun etta, thai thanni thangele identity create karthati  he amaka asche ekka ek dot mark, hakka haw black dot maNa, itte maLleri he viNgaDaan thaNka koru saadya naa ashi aMgele capability k dillele complements maNta.

Annek amka asche plus point maLLeri amka ek extra bhashe vaile hold, khanche jageri gelleri, ammi viNgadal thukunu kasane vishayu nippoka jalleri aMka he bhaashe mast help kartha. Ani vingad janan he bhaashe aDDi shiklyari aMka thanni aMchigele nai moNu kaLtha thangele uCCHaaraari!!! tavali ammi anekai complecated aMchigele words use karthati. eg:Kodyala kaden coffee 'k thoLkal monu ghara kamachel eduru sangche roodi assa. Ek kaden kass jalle malleri ghara ayile kamaachek ghara yajmaani dhuvelaggi "Hikka thoLkaL kornu haadi" maLali. Dhuv bhittari vattana thi ayil kamaachi thoLkalak reNv Galnukka maLaLi !!!
ReNv he sakre 'k asche anvartha naam amgel KaDen, ti ayile kamaachek amchigele ani thajje complexity gottas monu kaLthari hE yajmaanile avaste devak preeti.ashi ammi mast pati vingDaal edur buddant javvo vaCchun vingaDal edur saan jallel vari assa.    
  
Jalleri aMka solsucha jaina nattile ekka vishayu maLLeri aMgele KhaaN- JavaN ani aachaaru-vichaaru !!! he poora vishayantu aMchigele out of out performance dittati...

"NikkuL foodie marre, ovula budpujjer !!!" mantha ashile migele friends circle. AMchigel KhaaN jaVanantu asche thithle vidha vidhaan vingad koNalaggi asheshna.
PawsaDik ek namne khaan - randayi, vaishakaari annek namneche !! prati ek parbek vingaD vingaD bhakshya-BHojya !!!

Atta aiche disu geyya bibbe disu shuru javche aiche disan, kithley marag asso jalleri aji ammi Bibbo ghara haaNu bibbe upkaari karna nathleri aji amka parab nattil maNke feel jatta. saMsaar paDve thulen aMbe season shuru monu viNgad sangka moNu na. annek aiche vishesh khaan malleri Ras VoDO. 

Asshi chaitra masari shuru jallele khaNa parab mukaarshitaa vatta. ram Navamik vingad viongad namne pacchoDi , magiri hanumanth jayanti, ashi chaltha astha. ammi khai thai foodie malleri upvaasu asche ashtami parbe thai ammi full pot Javan karthati.. naam ke vaaste upvaasu!!!

tarne keerlu, tudiche pathrade paan, vaishaakari sukkon davrlele bikkanD magge midi gallele gajbaje pannari asleri paaNch sa rulaaNva idli giLLeri amgele poTTantu keLe rasayan ani phova meLameLi khavchek Jago astha !!! atta sanga upvaasu bari janma ettale krushNak !! rathri argya pradaanya jattari annek innings shuru kharthati !!! herdusu  "kaali upvaas darlel marre" maNthati.


Nave parbache nave thandla kheeri, kaarthika masanthule kuvaale raNdaayi , khichidi vishesh.. khai gelleri te asthati :P thuLsipooje disache avale gojju devastanache vishesh jalleri poorai amchigelele ghara kaylentu surnaLi ready astha. 

Karthik maas maNtana annek vishay udgaas ayle paLaya. amgele Daasu Bhatmamak busy asche janale ulloche malleri bhaari khushi, exspecially thanni busy ashil velari thanka rabbonu ullaisi korochaNtu thakka mast ishTa. ek panta ek bail manishi thagele aNgadi puDDI gevche ayili. Tho thigelaggi "Manjeshwarad onasa encha ittand..?" moNu thigelaggi amchigelele bagge vair koru shuru kelle.
thi kaLLele thondak "ee thingoLu alpa unnere edde appujji.. itte alpa konkani naklena mireda kajpu!!" maLaLi, teeNe mallele amgele  meere malleri black pepper ... jalleri teene maLLel full tuLu ntu arth kelleri te sentence arthu anarthu jatta !!!!

Ashi prati ek jan amgele khaaN javNaak solvalechi. Idli geyya kithle namne idli kartha palaya, idli , saNNan, khoTTO, MooDo ekka pittan jalleri; thakka idli, kultaa idli, moogadali idli, thoushe idli , poNsa muddo thajje bhaavND !! 

PoLenntu saada poLethulen shur jalleri, surnaLi , doddakka, uKDa tandla bhakri, thousaLi mukaari vacchunu thechi javna oTTu khavche kirla poLo, salla PoLo, piyava sanna PoLo, bajje paaL thai soNa chi amchigele, tajjey sanna PoLo karthati. 

thajje baiNi manke asche sanna khotto, hanthuy kithle bageche kartha paLaya, pathrado, thaikiLe muddo, dudde palle muddo, mashiNga sanga palle muddo, thajje fulla muddo.. aha evjaleri thonda udda etta ...

taLpa khana paLeya aMchigelenk monu jallele maraLva paan , maddi, KaLaLa maddi, chitte paan, goinT, FagiL,Taikilo, dudde kalo, kithle baag palaya, tarkaari , tajje phool, kaderi tajje PaL thai sona ashi ammi thajje variety variety randaay khaan karthati.

pavsaadi ayle malleri ALamb, alvati shuru jatta. prati ghara mansoon mastintu pOVnta!! saal, mitta gallel ambo , pach Ponasu, keerlu, Avalo prati ekkache vingad vingad ruchiche randap !!!!

poNsa timeri poNsa che special item amgele prati ghara tayaar jatta !!!

Jalke vishaya ayleri prati ek jaLkek vingad vingad masalo , vingad vingad taste !! 
nonveg khavche divaali paraab khashi visoru jatta sanga... amchigelele potta parbe disu !!!
 
GSB - ammi Gowda Saaraspatha BrahmaN monche badla Ghashi, song, Bendi mou change korche laik ki moNu nave !!!

ashi sersitha gelleri list diga jatta... khavka monu ash jatta !!! te list anuguN javnu ammi ranche vasari rigleri vingaD vingaD Item kartha ammi bhair evchaak minimum 6-7 maino jai itte mantati ...??

ullailele mast jalle... thummi parbe javaN javtha thantu makkai udgaasu kelleri thumgele vaTTentu haaw migele parab achaarsitha...

yes, i'm missing all those GSB stuffs here again :'(
 
Proud to say i'm GSB and i'm a foodie !!!

yours
Kamath_kumble.

Tuesday, March 6, 2012

ಡೈರಿ ಮುಚ್ಚಿದ ಬಳಿಕ







ಡೈರಿ ಮುಚ್ಚಿದ ಬಳಿಕ
ಅಂತೂ ಇಂತೂ ನನ್ನ ಇಂಜಿನಿಯರಿಂಗ್ ಮುಗಿಯಿತು, ಕೆಲಸವೂ ಸಿಕ್ಕಿತು. ಆದರೆ ಆ ಶ್ರಾವಣಿಯ ಬಗ್ಗೆ ಹಂಬಲ ಕಡಿಮೆ ಆಗಲಿಲ್ಲ, ಎಲ್ಲಿದ್ದಾಳೋ ಎಂಬ ಪ್ರಶ್ನೆ ..? ಯಾರಿಗೂ ಗೊತ್ತಾಗದಂತೆ ಎಲ್ಲೋ ದೂರದಲ್ಲಿದ್ದಾಳೆ.
ಅವಳಂದು ಕೊಂಡಂತೆ ನನಗೇ ಸ್ನೇಹಳನ್ನು ಸ್ವೀಕರಿಸಲು ಮನ ಒಪ್ಪಲಿಲ್ಲ ನಾನೇ ಸರ್ವಸ್ವ ಎನ್ನುತಿದ್ದ ಸ್ನೇಹ ಎರಡು ತಿಂಗಳ ಹಿಂದೆ ಅವಳ ತಂದೆ ತಾಯಿ ನೋಡಿದ ಗಂಡನ್ನೇ ಮದುವೆ ಆಗಿ ಹೋದಳು. ಅವಳಿಗೆ ನಾನು ಕೊಟ್ಟ ಮಾತಂತೆ ಎರಡು ವಾರ ರಜೆ ಗಿಟ್ಟಿಸಿ ಊರಿಗೆ ಹೋಗಿ ಎಲ್ಲದರ ಮೇಲ್ವಿಚಾರಣೆ ನೋಡಿದ್ದೆ.

ಇವ್ವೆಲ್ಲದರ ನಡುವೆ ನಮ್ಮ ಪ್ರೇಮ ಕಥೆಯಲ್ಲಿನ ಇನ್ನೊಂದು ಪಾತ್ರ ಡ್ರೈವರ್ ದಾಮೋದರ್ ಅನ್ನು ಬೇಟಿಯಾಗಿದ್ದೆ. ಅವರು ಈಗ ರಿಕ್ಷಾ ಓಡಿಸುತ್ತಿಲ್ಲ. ನಾಲ್ಕು ತಿಂಗಳ ಹಿಂದೆ ರಿಕ್ಷಾ ಆಕ್ಸಿಡೆಂಟ್ ನಲ್ಲಿ ತನ್ನ ಒಂದು ಕಾಲಿನ ಹಿಡಿತವನ್ನೇ ಕಳಕೊಂಡಿದ್ದರು. ಪಾಪ ಎರಡು ಹೆಣ್ಣು ಮಕ್ಕಳು ಅವರಿಗೆ, ಅವರ ಮನೆಯ ಪರಿಸ್ಥಿತಿ  ನೋಡಿದರೆ ಬೇಜಾರೆನಿಸುತ್ತದೆ. ಹೋದಾಗ ಶ್ರಾವಣಿ ಸಿಕ್ಕಳೆ..? ಎಂದು ಹೇಳಿ ಗೇಲಿ ಮಾಡುತಿದ್ದರು, ಅವಳ ಆ ಡೈರಿ ಎಲ್ಲಿದೆ ಎಂದು ಹುಡುಕಿದೆ, ನನ್ನ ಹುಡುಕುವ ನೋಟ ನೋಡಿ ಅವರು ಮಗಳಲ್ಲಿ "ಶಾಂತ ಆ ಡೈರಿ ತಕೊಂಡು ಬಾ "ಅಂದರು .ಆ ಬಡ ಜೀವ ಇದನ್ನು ತುಂಬಾ ಜೋಪಾನವಾಗಿ ಒಂದು ಟ್ರಂಕ್ ನಲ್ಲಿ ಇಟ್ಟಿದ್ದರು. ಶಾಂತ ಆ ಡೈರಿ ತೆಗೆದು ಕೊಂಡು ಬಂದಳು.

ನಾನು "ಒಮ್ಮೆ ಓದಿ ನಿಮಗೆ ಹಿಂತಿರುಗಿಸುವೆ "ಅಂದೆ
ಅವರು "ಸರಿಯಪ್ಪ ..." ಅಂದರು.

ಒಮ್ಮೆಗೆ ಎಲ್ಲಾ ಕೆಂಪು ಪುಟಗಳು, ಅವಳು ಸ್ನೇಹ ಆಗಿ ಬರೆದ ಪತ್ರ ಎಲ್ಲಾ ಓದಿದೆ, ನನಗರಿವಿಲ್ಲದಂತೆ ಒಂದು ಹನಿ ಕಣ್ಣೇರು ಜಾರಿತು. ಇದನ್ನು ಕಂಡ ಅವರು "ನಿನ್ನಲ್ಲೇ ಇರಲಿ ಆ ಡೈರಿ, ಶ್ರಾವಣಿ ನನಗಿಂತ ನಿನಗೆ ಹೆಚ್ಚು ಹತ್ತಿರವಾದವಳು ... ನೀನು ತೆಗೆದು ಕೊಂಡು ಹೋಗು ಆ ಪವಿತ್ರ ಗ್ರಂಥ !!! " ಅಂದರು.
ನಿಜಕ್ಕೂ ಅದು ಪ್ರೇಮ ಗ್ರಂಥವೇ ಆಗಿತ್ತು
ಊರಿನಿಂದ ಬಂದಮೇಲೆ ನಡ ನಡುವೆ ದಾಮೋದರ್ ರಿಗೆ ಫೋನ್ ಆಯಿಸಿ ಅವರ ಕಷ್ಟ ಸುಖ ವಿಚಾರಿಸುತಿದ್ದೆ .

ಮೊನ್ನೆ ದಾಮೋದರ್ ಫೋನ್ ಮಾಡಿದ್ದರು, ನಾನು ಕಾಲ್ ಕಟ್ ಮಾಡಿ ತಿರುಗಿ ಅವರಿಗೆ ಕಾಲ್ ಮಾಡಿದೆ
ಅವರು"ನಿನಗೊಂದು ಸಿಹಿ ಸುದ್ದಿ ಇದೆ,"ಅಂದರು.

ನಾನು "ಏನು ಶ್ರಾವಣಿಯನ್ನು ಮತ್ತೆ ಮಂಗಳೂರಿನಲ್ಲಿ ಬೇಟಿ ಆದಿರೆ..? "ಅಂದೆ
ಅದಕ್ಕೆ ಅವರು "ಹಾಗೆಯೇ ಅನ್ನ ಬಹುದು ..." ಅಂದರು
ನನ್ನಲ್ಲಿ ಇನ್ನೂ ಕುತುಹಲ ಹೆಚ್ಚಿತು, ನಮ್ಮಲ್ಲಿನ ಪವಿತ್ರ ಪ್ರೇಮ ನಿಜವಾಗುವ ಗಳಿಗೆ ಬಂತಲ್ಲಾ ಎಂದು ಖುಷಿ ಪಟ್ಟೆ, ಅವರಲ್ಲಿ "ಹೇಳಿ ನೀವು ... ಏನಾಯ್ತು...?"
ಅವರು "ಇವತ್ತು ಶ್ರಾವಣಿ ನನಗೆ ಕಾಲ್ ಮಾಡಿದ್ದಳು .."
ನಾನು ಮದ್ಯದಲ್ಲೇ ಅವರನ್ನು ತಡೆದೆ "ಕಾಲಾ ...? ಅವಳಿಗೆ ನಿಮ್ಮ ನಂಬರ್ ಎಲ್ಲಿಂದ ಸಿಕ್ಕಿತು ...?"ಅಂದೆ
ಅವರು "ಅದೇ ಕಣಪ್ಪ ಆ ಸಂಜೆ ನಾನು ಅವಳನ್ನು ರಿಕ್ಷಾದಲ್ಲಿ ರೈಲ್ವೆ ಸ್ಟೇಷನ್ ಗೆ ಕರೆದು ಕೊಂಡು ಹೋಗಬೇಕಾದರೆ, ಮಾತಿನ ನಡುವೆ ನನ್ನಲ್ಲಿ ಅವಳು ನನ್ನ ನಂಬರ್ ಕೇಳಿದ್ದಳಂತೆ, ಎಲ್ಲಿಯೋ ಬರೆದಿಟ್ಟಿದ್ದೆ ಅದು ಇವತ್ತು ಸಿಕ್ಕಿತು ಅಂತ ಹೇಳಿದಳು..."
ನಾನು "ಅರ್ರೆ ನನಗೆ ಕೊಡಿ ಆ ನಂಬರ್!!!" ಅಂದೆ
ಅವರು "999... "ಎಂದು ನಂಬರ್ ಹೇಳಿದರು.
ನಾನು "ನೀವು ನನ್ನ ಬಗ್ಗೆ ಹೇಳಿದಿರೆ..?"ಅಂದೆ
ಅವರು ಅಲ್ಲಿಂದ "ಇಲ್ಲ ಕಣಪ್ಪ .. ನಿನ್ನ ಬಗ್ಗೆ ಹೇಳಿದರೆ ಅವಳೆಲ್ಲಿ ಕೊರಗುವಳೋ ಅಂದು ಹೇಳಲಿಲ್ಲ .. ನೀನೆ ಮಾತಾಡು .."ಅಂದರು
ನಾನು "ನಿಮ್ಮ ಈ ಉಪಕಾರ ಯಾವತ್ತು ಮರೆಯಲ್ಲಾ.. ನನ್ನ ಪ್ರೀತಿಯ ನನಗೆ ದಕ್ಕಿಸಿಕೊಟ್ಟ ದೇವರಾದಿರಿ ..."
"
ಈಗ ಅದೆಲ್ಲಾ ಯಾಕಪ್ಪಾ ... ಅವಳನ್ನು ವರಿಸು ... ನೀನು ಈ ಒಂದು ವರ್ಷ ಪಟ್ಟ ಪಾಡು ಯಾವ ಪ್ರೇಮಿಗೂ ಬೇಡ ..."ಅಂದರು
"
ಸರಿ , ಅವಳಲ್ಲಿ ಮಾತಾಡಿ ನಿಮಗೆ ಮತ್ತೆ ಫೋನ್ ಮಾಡುತ್ತೇನೆ ... ಮತ್ತೊಮ್ಮೆ ಧನ್ಯವಾದಗಳು "ಎಂದು ಕಾಲ್ ಕಟ್ ಮಾಡಿದೆ .


 999
ಒತ್ತುತಿದ್ದಂತೆ ನನ್ನ ಎದೆಯ ಬಡಿತ ಹೆಚ್ಚಾಗ ತೊಡಗಿತು, ಅವಳಿಗೆ ನಾನು ಮೊದಲ ಬಾರಿಗೆ ಪ್ರೊಪೋಸ್ ಮಾಡುವಾಗ ಇಂಥಹ ಯಾವುದೇ ಅನುಭವ ವಾಗಿರಲಿಲ್ಲ, ಆದರೆ ಯಾಕೋ ಇಂದು ಸಂತಸ,ಹೆದರಿಕೆ ಎರಡೂ ಒಟ್ಟಿಗೆ ಆಗುತಿತ್ತು.

"
ಯಾರ ಸಂಸಾರಿಕ್ಕುನದ್ ...?" ಅಂದಳವಳು, ಅದೇ ಮೊದಲದಿನದ ಕಂಪು ಇಂದೂ ಇತ್ತು.ಒಂದು ವರುಷದಲ್ಲಿ ಅವಳು ಮಲೆಯಾಳಂ ಕಲಿತಿದ್ದಳು ಎನ್ನುದಕ್ಕೆ ಅವಳ ಮಾತಿನ ಧಾಟಿಯೇ ಉತ್ತರ ನೀಡುತ್ತಿತ್ತು.
ನಾನು ಉತ್ತರಿಸಲಿಲ್ಲ.
ಅವಳು ಪುನಃ "may i know you ..?"ಅಂದಳು
ನನಗೆ ಮಲಯಾಳಂ ನಲ್ಲಿ ಉತ್ತರಿಸಲೇ, ಇಲ್ಲ ಇಂಗ್ಲಿಷ್ನಲ್ಲಿ ಉತ್ತರಿಸಲೇ ...?ಬೇಡ ಕನ್ನಡ ದಲ್ಲಿ ಉತ್ತರಿಸೋಣ...
"
ಶ್ರಾವಣಿ ...?"
"
ಅದೇ ಯಾರ ಸಂಸಾರಿಕ್ಕುನದ್ ...?"
"
ನಾನು ಕನ್ನಡದ ಹುಡುಗ ..."
ಒಂದು ಕ್ಷಣ ಅವಳು ಮೌನ ವಾದಳು, ಅವಳು ನನ್ನ ದನಿಯನ್ನು ಗುರುತಿಸಿದಳು ಎಂದುಕೊಂಡೆ.
ಎರಡನೇ ಕ್ಷಣಕ್ಕೆ ಅವಳು "ನೀವು ...ಯಾರಿಂದ ನಿಮಗೆ ನನ್ನ ನಂಬರ್ ಸಿಕ್ಕಿತು ...? ನನ್ನ ಹೆಸರು ಶ್ರಾವಣಿ ಅಂತ ಹೇಗೆ ಗೊತ್ತಾಯಿತು ..?"
ನಾನು "ಹುಂ .. ನನ್ನ ನಿನ್ನ ಬೇಟಿ ಆಗಲೇ ಬೇಕಿತ್ತು, ಆ ಪ್ರೀತಿ ಬರೆಯ ನೆನಪಲ್ಲಿ ಅಳಿಸಿ ಹೋಗುವಂತದಲ್ಲಾ , ನಾವಿಬ್ಬರು ಸಮನಾಗಿ ಹಂಚಿ ಜೀವನಪೂರ್ತಿ ಅನುಭವಿಸ ಬೇಕಾದದ್ದು ...  "
ಅವಳು "ಆದರೆ ನಾನು ನಿಮ್ಮ ಬಿಟ್ಟು ಬದುಕುವ ಕಲೆ ಕರಗತ ಮಾಡಿದ್ದೆ ... ಯಾರ ಸಂಪರ್ಕದಲ್ಲಿರ ಬಾರದು ಎಂದು ಪ್ರಾಣ ಸ್ನೇಹಿತೆ ಸ್ನೇಹಳಿಗೂ ನನ್ನ ನಂಬರ್ ಕೊಟ್ಟಿರಲಿಲ್ಲ,ಆದರೆ ಅದು ನಿಮಗೆ ಹೇಗೆ ಸಿಕ್ಕಿತು ...?"
ನಾನು "ಸಮಯ ಬಂದಾಗ ಹೇಳುತ್ತೇನೆ ಎಲ್ಲಾ ಕಥೆ ...ನೀನು ಹೇಗಿದ್ದೀಯ ..?"
ಅವಳು "ಚೆನ್ನಾಗಿದ್ದೇನೆ ...MSc ಮಾಡಲು ಬಂದ ನನ್ನ ಮನದಲ್ಲಿನ ಬಯಕೆ ನನ್ನ ಮಾಮನಿಗೆ ತಿಳಿಯಿತು. ಅವರು ತಮ್ಮ ಬ್ಯಾಂಕ್ ನಿಂದ ವಿದೇಶಿ ಯುನಿವೆರ್ಸಿಟಿ ಗೆ ಅರ್ಜಿ ಹಾಕಿಸಿ ನನಗೇ ಅಲ್ಲಿ ಮುಂದಿನ ಶಿಕ್ಷಣಕ್ಕೆ ಅನುವು ಮಾಡಿಕೊಟ್ಟರು. ಎರಡು ವರ್ಷ ಅಲ್ಲಿದ್ದೆ ಕಳೆದ ತಿಂಗಳು ಕೋರ್ಸ್ ಮುಗೀತು. ಅಲ್ಲಿನ ಯುನಿವೆರ್ಸಿಟಿ ಯಲ್ಲೇ ಬೆಂಗಳೂರಿನ ಒಂದು ಫರ್ಮಾಸಿಟಿ ಕಂಪೆನಿ ಯಲ್ಲಿ ಕೆಲಸವೂ ಸಿಕ್ಕಿತು.  ಮುಂದಿನ ವಾರವೇ ಅಮ್ಮನೊಂದಿಗೆ ಬೆಂಗಳೂರು ಸೇರುವೆ. ನನ್ನ ಎಲ್ಲ ಕನಸು ನೆರವೇರಿತು"ಅಂದಳು.
"ನನ್ನ ಕನಸೂ ನೆರವೇರಿದವು" ಅಂದೆ ನಾನು.
"ನೀನೆಲ್ಲಿದ್ದಿಯಾ...?" ಅಂದಳು.
"ನಾನು ಬೆಂಗಳೂರು... ದೂರ ಹೋಗಿ ಹತ್ತಿರ ಆದಿ ನೀನು ...  "ಅಂದೆ
"
ಹುಂ ..."
"
ಬೇಟಿ ಆಗುವ ಮುಂದಿನ ವಾರವೇ ... ನಿನಗೆ ಸ್ವಾಗತ ನಾನು ಕೊರ್ತೇನೆ ಬೆಂಗಳೂರಿನಲ್ಲಿ ...ಯಾವುದರಲ್ಲಿ ಬರುತಿದ್ದಿಯ ಹೇಳು...?"
"
ಫ್ಲೈಟ್ .. ಅಮ್ಮನಿಗೆ ಹೆಚ್ಚು ಹೊತ್ತು ಕುಳಿತು ಪ್ರಯಾಣಿಸಲಾಗದು.. "
"
ಸರಿ ಹಾಗಾದರೆ ನಾನು ನಿನಗಾಗಿ ವಿಮಾನ ನಿಲ್ದಾಣದಲ್ಲಿ ಕಾಯುತ್ತಾಲಿರುವೆ ..."
"
ಸರಿ ಹಾಗಾದರೆ ನಾನು ಅದೇ ಹಳೆಯ ಕೆಂಪು ಟಾಪ್ ಮತ್ತು ಕಡು ನೀಲಿಯ ಜೀನ್ಸ್ ನಲ್ಲಿರುತ್ತೇನೆ ... ನನ್ನನ್ನು ಆ ಜನ ಜಂಗುಳಿಯಲ್ಲಿ ಪತ್ತೇ ಹಚ್ಚು...ನೋಡೋಣಾ "ಅಂದಳು
"
ಕಳೆದ ನಿನ್ನನ್ನೇ ನಾನು ಹುಡುಕಿರುವಾಗ,ಪಡೆದ ನಿನ್ನನ್ನು ನಾನು ಗುರುತಿಸಲಾರೆನೆ ...?" ಅಂದೆ
ಅವಳು "I LOVE YOU "
ನನ್ನದೊಂದೇ  ಉತ್ತರ "ME TOO "
ಅದೇ ಚೆಲುವು ಮತ್ತೆ ನೋಡಲು ನನ್ನ ಬ್ರಹ್ಮಚಾರ್ಯದ ದಿನಗಳಿಗೆ ತೆರೆಯೇಲೆಯುವುದು ಸೂಕ್ತ ಎನಿಸಿತು.
ಎರಡೇ ತಿಂಗಳಲ್ಲಿ ಅವಳು ನನ್ನ ಹಿಂದಿನ ಸೀಟ್ ನಲ್ಲಿ ಕುಳಿತು ಪರ್ಮಾಸಿಟಿ ಕಂಪೆನಿ ಎದುರಿಗೆ ಇಳಿಯುತ್ತಾಳೆ. ಲಾಪ್ಟಾಪ್ ಹಿಡಿದು ನಾನು ಐ.ಟಿ ಪಾರ್ಕ್ ನಲ್ಲಿರುವ ನನ್ನ ಆಫೀಸ್ ತಲುಪಿ ನನ್ನ ಕ್ಯುಬಿಕಲ್ ಗೆ ಬಂದಾಗ ಆ ಮರೂನ್ ಬಣ್ಣದ ಡೈರಿಯ ಮುಖ ಪುಟದಲ್ಲಿ ನನ್ನನ್ನೇ ನೋಡುತ್ತಾ ಮತ್ತೆ ಮುಗುಳ್ನಗುತ್ತಾಳೆ. ಮೊದಲ ನೋಟವನ್ನು ನಾನು ಮೊಬೈಲ್ ನಲ್ಲಿ ಸೆರೆಹಿಡಿದು ಅಚ್ಚೋತಿದ್ದೆ. ಆ ಫೋಟೋ ವನ್ನು ಅವಳ " ಇದು ನನ್ನ ಮನಸ್ಸು, ನೀವು ನನ್ನವ( ಳು/ನು ) ಆದರೆ ಮುಂದೆ ಹೋಗುವ ಮುಂಚೆ ಒಂದು ಕ್ಷಣ ಆಲೋಚಿಸು .... "ಮೇಲೆ ಅಂಟಿಸಿದ್ದೇ. ಅವಳ ಮನಸ್ಸು ಓದುವುದರಲ್ಲಿ ಏನೋ ಹಿತ ಎನಿಸುತಿತ್ತು. ಭಾದಿಸುವ ಆ ಸಾಲುಗಳನ್ನು ಅವಳ ನಗೆಯ ಹಿಂದೆ ಅಡಗಿಸಿ ಇಟ್ಟೆ.
ಕೆಳಗಿನ ನಿನ್ನ ಶ್ರಾವಣಿ ಮಾತ್ರ ಇನ್ನೂ ಹೊರಗೆ ಇದೆ. ನನ್ನ ಶ್ರಾವಣಿ ಅವಳಾದದಕ್ಕೆ ಪ್ರತಿ ಬಾರಿ ಡೈರಿ ನೋಡುವಾಗ ಮನಸ್ಸು ಹಿಗ್ಗುತ್ತದೆ.

*******************************************************************************************
 13/11/2010
 ಕಾಮತ್ ಕುಂಬ್ಳೆ


Monday, March 5, 2012

ಡೈರಿ : ಪುಟ ೫





ಪುಟ

ಡೈರಿ ನಾನು ಮುಚ್ಚ್ಚಿ ಬದಿಗಿಟ್ಟೆ, ನನ್ನ ಹಿಂದೆ ನಡೆದಿದ್ದ ಅದೆಷ್ಟೋ ವಿಚಾರಗಳು ನನ್ನ ಮುಂದೆ ಬಂದಾಗಿತ್ತು, ಮನಸ್ಸಲ್ಲಿ ನನ್ನ ಸಹನಾ ನನ್ನಿಂದ ದೂರವಾಗಿರುವುದು ಖಾತ್ರಿಆಯಿತು. ಅವಳ ಬಗ್ಗೆ ನನಗಿದ್ದ ಪ್ರೀತಿ ಇಂದು ಇನ್ನೂ ಎರಡು ಪಟ್ಟು ಹೆಚ್ಚಾಯಿತು, ನಾನು ನಿನ್ನೆ ಹೋಗಿದ್ದರೆ ಅವಳನ್ನು ಬೇಟಿಯಾಗುತಿದ್ದೆ ಅವಳು ಬೇರೆ ಏನೋ ಕಾರಣ ಹೇಳಿ ನನ್ನಿಂದ ದೂರ ಆಗುತಿದ್ದಳು ಎಂದೆನಿಸಿತು. ಅವಳಿಗೆ ದೂರ ಹೋಗುವ ವಿಷಯ ಗೊತ್ತಿದ್ದರೂ ಯಾಕಾಗಿ ನನ್ನನ್ನು ನಿನ್ನೆ ಭೇಟಿಮಾಡಲು ಕರೆದದ್ದು ಆಕೆ ..?

ಎರಡು ತಿಂಗಳಿಂದ ಅವಳು ತೋರಿಸುತಿದ್ದ ನನ್ನ ಬಗೆಗಿನ ಆಲಸ್ಯದ ಮೂಲ ಅಂದು ಜೊತೆಯಾಗಿ ಸವೆದ ಐಸ್ ಕ್ರೀಮ್ ಎಂದು ಇವತ್ತು ತಿಳಿಯಿತು. ಅಂದು ಪ್ರೇಮಿಗಳ ದಿನದಂದು ಸ್ನೇಹಳಿಗೆ ನಿರಾಕರಿಸಿ ಅವಳಿಗೆ ಪ್ರೇಮ ನಿವೇದನೆ ಮಾಡಿದಾಗ ಅವಳು  ಉತ್ತರಿಸದೆ ಇದ್ದ ಕಾರಣ.  ಒಂದು ತಿಂಗಳ ಹಿಂದೆ ನಾನು ಒಮ್ಮೆ ಅವಳಿಗೆ ಕರೆ ಮಾಡಿದಾಗ ಅವಳು "ನಾನು ಮನೆಯಲ್ಲಿ ಇದ್ದೇನೆ, ಹಿರಿಯರ ಎದುರಲ್ಲಿ ಮಾತಾಡುವುದು ನನಗೆ ಸರಿ ಅನಿಸಲ್ಲ, ಮಂಗಳೂರಿಗೆ ಬಂದ ನಂತರ ನಾನೇ ನಿನಗೆ ಕರೆ ಮಾಡುತ್ತೇನೆ. "ಅಂದ ಮಾತಿನ ಅರ್ಥ, ಅವಳು ಎರಡು ತಿಂಗಳಿಂದ ನಾನು ಓದಿನಲ್ಲಿ ಬ್ಯುಸಿ ಇದ್ದೇನೆ ಮೆಸ್ಸೇಜ್ ಮಾಡಲು ಪುರುಸೊತ್ತಿಲ್ಲ  ಅಂದ ವಿಚಾರ ಇಂದು ಮನದಟ್ಟಾಯಿತು.
ನಾನು ಇನ್ನು ಸ್ನೇಹಳ ಪ್ರೀತಿಯನ್ನು ಸ್ವಿಕರಿಸ ಬೇಕೇ ..? ಇಲ್ಲ ನನ್ನ ಬಿಟ್ಟು ಹೋದ ಸಹನಳನ್ನು ಪಡಕೊಳ್ಳಲು ಪ್ರಯತ್ನಿಸ ಬೇಕೇ ಎಂಬ ದ್ವಂದ್ವ ಆವರಿಸಿತು. ನನಗರಿವಿಲ್ಲದಂತೆ ನನ್ನನ್ನು ಬಿಟ್ಟು ಅವಳು ಹೋಗಿದ್ದರೆ ಬೇಜಾರಿರಲಿಲ್ಲ, ಈಗ ನನಗೆ ಎಲ್ಲ ವಿಚಾರ ತಿಳಿಯಿತಲ್ಲಾ ಅದಕ್ಕೆ ಈ ತರಹದ ವೇದನೆ ಕಾಡುತಿತ್ತು. ಕೊನೆ ಪಕ್ಷ ಅವಳು ಡೈರಿಯ ಮೊದಲ ಪುಟದಲ್ಲಿ ಬರೆದ "ಇದು ನನ್ನ ಮನಸ್ಸು, ನೀವು ನನ್ನವ( ಳು/ನು ) ಆದರೆ ಮುಂದೆ ಹೋಗುವ ಮುಂಚೆ ಒಂದು ಕ್ಷಣ ಆಲೋಚಿಸು ...." ವಾಕ್ಯದ ಬಗ್ಗೆ ಚಿಂತಿಸಿದ್ದರೆ ನನಗೆ ಈ ಪರಿಸ್ತಿತಿ ಬರುತ್ತಿರಲಿಲ್ಲಾ, ಡೈರಿ ಓದುವುದು ತಪ್ಪೆಂದು ಗೊತ್ತಿದ್ದರು ಯಾಕಾದರೂ ನಾನು ಅವಳ ಮನಸನ್ನು ತಿಳಿಯುವ ಹುಚ್ಚು ಪ್ರಯತ್ನಕ್ಕೆ ಕೈಹಾಕಿದೇನೋ ... ಎಂದನಿಸಿತು.

ಆದದ್ದು ಸಾಕು ಇನ್ನೂ ಮುಂದೆ ಈ ಡೈರಿ ಓದುವುದು ಬೇಡ ಅಂದು ಕೊಂಡೆ.
ಆದರೆ ಅವಳ ಮನಸ್ಸಲ್ಲಿ ನನ್ನ ಸ್ಥಾನ ನಾ ಕಳಕೊಂಡೆನೇ ಎಂಬ ಪ್ರಶ್ನೆ ಕಾಡಲಾರಂಬಿಸಿತು. ಓದುವುದು  ತಪ್ಪಲ್ಲಾ, ಓದಿದರೆ ಈಗ ಅವಳೆಲ್ಲಿರುವಳು, ಸ್ನೇಹಳ ಮನಸ್ತಿತಿ ಏನಾಗಿರುವುದು  ಎಲ್ಲ ತಿಳಿದಂತಾಗುತ್ತದೆ ಎಂದು ಮುಚ್ಚಿಟ್ಟ ಡೈರಿ ತೆರೆದೆ.

ಫೆಬ್ರವರಿ ೧೪ ರ ನಂತರ ಹಲವು ಪೇಜ್ ನಲ್ಲೂ ಕೆಂಪು ಬಣ್ಣದ ಲೇಖನ ವಿರಲಿಲ್ಲ, ಹಿಂದಿನಂತೆ ಪುಟದ ಕೆಳಗೆ ನನ್ನ ಕುರಿತಾಗಿ ಬರೆದ ವಾಕ್ಯಗಳೇ ಮಾಯವಾಗಿದ್ದವು. ನಾನು ನನ್ನನ್ನೇ ಪ್ರಶ್ನಿಸಿದೆ ನಾನು ಅವಳನ್ನು ಆ ದಿನಗಳಲ್ಲಿ ಸಂಪರ್ಕಿಸದೆ ಇದ್ದೇನೆ ..?
ಇಲ್ಲ ಪ್ರತಿ ದಿನ ಅವಳಿಗಾಗಿ ಹೊಸ ಹೊಸ ಮೆಸ್ಸೇಜ್ ಗಳನ್ನು ಹುಡುಕಿ ಕಳುಹಿಸುತಿದ್ದೆ, ಅದರೂ ಅವಳ್ಯಾಕೆ ಈ ವಿಚಾರವನ್ನು ಅಲ್ಲಿ ನೋಟ್ ಮಾಡಲಿಲ್ಲ...?

ಪುಟ ತಿರುವುತ್ತಾ ಹೋದೆ, ಎಲ್ಲೂ ನನ್ನ ಕುರಿತಾದ ಇಲ್ಲವೇ ಸ್ನೇಹಳ ಕುರಿತಾದ ಮಾತಿರಲಿಲ್ಲ, ಹಿಂದಿನ ಬರವಣಿಗೆಗೂ ಈಗಿನ ಬರವಣಿಗೆಗೂ ಅಜಗಜಾಂತರ ವ್ಯತ್ಯಾಸವಿತ್ತು. ಅರವತ್ತು ದಾಟಿದ ಒಬ್ಬ ಮೇಧಾವಿಯ ದಿನಚರಿಯಂತೆ ಇತ್ತು ಎಲ್ಲಹ ಬರವಣಿಗೆ. ಮನುಷ್ಯರ ಚಿತ್ರ ವಿಚಿತ್ರ ನಡುವಳಿಕೆ, ರಾಜಕಾರಣಿಗಳ ಮರ ಕೊತಿಯಾಟದ ನಾಟಕ, ರೈತರ ಸಮಸ್ಸೆ, ಶೋಷಣೆಗೆ ಒಳಗಾದ ಮಹಿಳೆಯ ಕುರಿತಾದ ಬರಹಗಳು ಅಲ್ಲಿ ತುಂಬಿದ್ದವು.
ನನ್ನ ಸಹನಾ ತಪ್ಪಾಯಿತು ಶ್ರಾವಣಿ ತುಂಬಾ ಬದಲಾಗಿದ್ದಳು ಆ ಘಟನೆಯ ಬಳಿಕ, ನನ್ನನ್ನು ಮರೆಯಲು ಇಂತಹ ಹವ್ಯಾಸದಲ್ಲಿ ತೊಡಗಿದ್ದಳು.

ಓದುತ್ತಾ ಓದುತ್ತಾ ಅವಳು ಬರೆದ ಕೊನೆಯದಿನ ಅಂದರೆ ಏಪ್ರಿಲ್ 25 ನಿನ್ನೆಯ ಲೇಖನದ ವರೆಗೆ ಬಂದೆ ಪುಟ ತಿರುಗಿಸಿದೆ, ಅದು ಕೆಂಪುಬಣ್ಣದ ಲೇಖನಿ ಇಂದ ಬರೆದಿತ್ತು .ಅವ್ವು ನನ್ನ ಕುರಿತಾದ ಮಾತಾಗಿತ್ತು.

**********


ನನ್ನ ಮನಸ್ಸು ಇಷ್ಟು ಗಟ್ಟಿಯಾದದ್ದು ಎಂದು ನನಗೆ ಗೊತ್ತಿರಲಿಲ್ಲ, ನೋಡು ಎರಡು ತಿಂಗಳಿಂದ ಅವನ ಬಗ್ಗೆ ಯಾವುದೇ ವಿಚಾರ ಮಾಡಲಿಲ್ಲ ಆದರೆ ನಾಳೆ ಅವನನ್ನು ಬಿಟ್ಟು ಬಹುದೂರ ಹೋಗುವ ನಾನು ಇಂದು ಅವನಿಗೆ ನಾಳೆ ನನ್ನನ್ನು ಮಂಗಳೂರಿನಲ್ಲಿ ಬೇಟಿ ಆಗುವಂತೆ ಹೇಳಿ ಮೆಸ್ಸೇಜ್ ಮಾಡಿದ್ದೇನೆ. ನಾಳೆ ನನ್ನ ಎಲ್ಲಾ ಕಥೆಗೂ ಒಂದು ಸುಂದರ ಪೂರ್ಣ ವಿರಾಮ ಹಾಕುತ್ತೇನೆ. ಯಾರಿಗೂ ಗೊತ್ತಾಗದಂತೆ ಸ್ನೇಹಳಿಗೆ ಅವನನ್ನು ಸೇರಿಸುವಂತೆ ಮಾಡುತ್ತೇನೆ, ನನ್ನ ಸ್ನೇಹಿತೆ ಚೆನ್ನಾಗಿರಬೇಕು, ಅವನು ಅವಳಿಗೆ ಸಿಕ್ಕುವುದರಲ್ಲೇ ಹೆಚ್ಚಿನ ಅರ್ಥ ವಿರುವುದು.

ನಾನು ಅವನಲ್ಲಿ ಕಳೆದ ಎರಡು ತಿಂಗಳಿಂದ ಮಾತಾಡಿರಲಿಲ್ಲ, ಅವನಂತೂ ದಿನಕ್ಕೆ 3 -4ಮೆಸ್ಸೇಜ್ ಕಳುಹಿಸುತ್ತ ಇದ್ದ ಮೊದಲಿಗೆ ಅವನ ಮೆಸ್ಸೇಜ್ ಗಾಗಿ ಕಾಯುತಿದ್ದ ನನಗೆ ದಿನ ಕಳೆದಂತೆ ವೈರಾಗ್ಯ ಹೆಚ್ಚಿತು. ಇದು ಹದ್ದು ಮೀರುವುದು ಬೇಡ ಹೇಳಿ ನಾನು ನನ್ನ ನೆಚ್ಚಿನ ವಿಷಯವಾವ ಮನಶಾಸ್ತ್ರ ದ ಬಗ್ಗೆ MSc  ಮಾಡುವಂತ ತೀರ್ಮಾನಕ್ಕೆ ಬಂದೆ. ಮೈಸೂರ್ ವಿಶ್ವವಿದ್ಯಾನಿಲಯದಲ್ಲಿ  ಸೀಟ್ ಸಿಕ್ಕಿತ್ತು, ಅದರೂ ಅಲ್ಲಿ ಇದ್ದರೆ ಮನಸ್ಸು ಮತ್ತೆ ಮಂಗಳೂರಿನ ಕಡೆಗೆ ವಾಲುವುದರಲ್ಲಿ ಸಂಶಯವಿಲ್ಲ. ವಿದೇಶದಲ್ಲಿ ಹೋಗಿ ಓದುವ ಆಶೆ ಇದ್ದರೂ ಕೆಳ ಮದ್ಯಮ ವರ್ಗದ ತಂದೆ ಸತ್ತ ಮಗಳಿಗೆ ಅಷ್ಟು ಹಣ ಹೊಂದಿಸಿ ಕೊಡುವವರು ಯಾರು ಇರಲಿಲ್ಲ. ಅದಕ್ಕಾಗಿಯೇ ಎರ್ನಾಕುಲಂ ಆರಿಸಿ ಕೊಂಡೆ. ನನ್ನ ಸಣ್ಣ ಮಾಮನವರು ಅಲ್ಲಿ ಬ್ಯಾಂಕ್ ಉದ್ಯೋಗಿ ಮದುವೆ ಆಗದ ಕಾರಣ ನನ್ನ ಓದಿಗೆ ಅವರೇ ಆರ್ಥಿಕ ಸಹಾಯ ಒದಗಿಸುವವರು.ತಂದೆ ಸತ್ತಾಗಿಂದ ಅಮ್ಮ ಅಲ್ಲೇ ಇದ್ದಾರೆ, ನಾನು ಅಲ್ಲೇ ಹೋಗುವ ನಿರ್ಧಾರಕ್ಕೆ ಬಂದೆ.

ನಾಳೆ ಅವ ಬಂದೇ ಬರುತ್ತಾನೆ ಎಂಬ ನಂಬಿಕೆ ನನ್ನಲ್ಲಿದೆ. ಅವನಿಗೆ ಎರಡು ಗಂಟೆಗೆ ಬಾ ಎಂದು ಮೆಸ್ಸೇಜ್ ಮಾಡಿದ್ದೇನೆ. ನಾಲ್ಕು ಗಂಟೆಯವರೆಗೆ ಅವನನ್ನು ಅಲ್ಲಿ ಕಾಯುತ್ತೇನೆ. ಅವ ಬಾರದೆ ಇದ್ದರೆ ನಾನು ನನ್ನ ಟ್ರೈನ್ ಹಿಡಿದು ಕೊಂಡು ಎರ್ನಾಕುಲಂ ಸೇರುತ್ತೇನೆ. ಅವ ಸ್ವಲ್ಪ ಸಮಯ ನನ್ನ ಮೊಬೈಲ್ ಗೆ ಫೋನ್ ಆಯಿಸಬಹುದು. ಆದರೆ ನಾನು ಟ್ರೈನ್ ಹತ್ತುತಿದ್ದಂತೆ ಆ ಸಿಂ ಬದಲಾಯಿಸಿ ಬಿಡುತ್ತೇನೆ. ಕೆಲದಿನದ ಬಳಿಕ ನನ್ನ ಹತಾಶೆಯಲ್ಲೇ ಅತ್ತೆ ಮಗಳಾದ ಸ್ನೇಹಳ ಸೇರಿದರು ಸೇರಿಯಾನು.

ಒಂದು ವೇಳೆ ಅವನು ಅಲ್ಲಿ ಬಂದರೆ ಅವನಿಗಾಗಿ ನಾನು ಶ್ರಾವಣಿಯಾಗೆ ಎದುರಿಸುತ್ತೇನೆ.ಅವನಿಗಾಗಿ ನಾನು ಬರೆದಿಟ್ಟ ಪತ್ರ ಕೊಟ್ಟು ನಾನು ನನ್ನಷ್ಟಕ್ಕೆ ಟ್ರೈನ್ ಹತ್ತುತ್ತೇನೆ, ಅವನು ಆ ಪತ್ರ ಓದಿದ ಬಳಿಕ ಸ್ನೇಹಳನ್ನು ಸೇರಿಯೇ ಸೇರುತ್ತಾನೆ.

ಸ್ನೇಹ ಪೂರ್ಣ ಮನಸ್ಸಿಂದ ಅವನನ್ನು ಪ್ರೀತಿಸುತ್ತಾಳೆ  ಅವಳಿಗೆ ಅವನು ಸಿಗಬೇಕು, ನಾನು ಅವಳಿಗೆ ಕೊಟ್ಟ ಮಾತು ಉಳಿಸಬೇಕು

ಶ್ರಾವಣಿ

**********

ಈ ಪುಟ ತಿರುಗಿಸುತಿದ್ದಂತೆ ಮುಂದಿನ ಪುಟಗಳ ನಡುವೆ ನನಗಾಗಿಯೇ ಇಟ್ಟಪತ್ರ ಕಣ್ಣಿಗೆ ಬಿತ್ತು, ಅದನ್ನು ನಾನು ಕುತೂಹಲದಿಂದಲೇ ಕೈಗೆತ್ತಿ ಕೊಂಡೆ, ಡೈರಿಯಲ್ಲಿದ್ದ ಕೈಬರಹವೇ ಅದರಲ್ಲಿತ್ತು.ಓದಲು ಶುರು ಮಾಡಿದೆ,

ಪ್ರಿಯ
ನಿನ್ನ ಪ್ರಿಯತಮೆಯ ಸಹನಾಳ ಪ್ರೀತಿಯ ನಮಸ್ಕಾರಗಳು, ಇದೇನು ಸಹನಾ ಶ್ರಾವಣಿಯ ಕೈಯಲ್ಲಿ ಪತ್ರ ಕಳುಹಿದ್ದಾಳೆ ಎಂದು ಆಶ್ಚರ್ಯವೇ, ಎಲ್ಲಾ ವಿಚಾರವನ್ನು ನಿನ್ನಲ್ಲಿ ಮುಚ್ಚುಮರೆ ಇಲ್ಲದೆ ಹೇಳುತ್ತಿದ್ದೇನೆ, ಅಸಲಿಗೆ ನಿನ್ನ ಕಲ್ಪನೆಯಲ್ಲಿರುವ ಸಹನಾ ನಾನೇ, ನಿನ್ನ ಅತ್ತೆಮಗಳು ಸ್ನೇಹ, ಮೊದಲಿಗೆ ನಿನ್ನನ್ನು ಆಡಿಸಲೆಂದು ನಾನು ನನ್ನ ಗೆಳತಿ ಶ್ರಾವಣಿಯ ಮೊಬೈಲ್ ನಿಂದ ಮೆಸ್ಸೇಜ್ ಮಾಡಲು ಶುರು ಮಾಡಿದ್ದೆ, ಆದರೆ ನನ್ನ ಹುಡುಗಾಟ ಕ್ರಮೇಣ ನಿನ್ನನ್ನು ನನ್ನೆಡೆಗೆ ಅಂದರೆ ನನ್ನಲ್ಲಿನ ಸಹನಾ ನೆಡೆಗೆ ಆಕರ್ಷಿಸುವಂತೆ ಮಾಡಿದ್ದು ನನಗೆ ಅರಿವಾಯಿತು.

ನಿನಗಾಗಿ ನಾನು ಹಿಂದೊಮ್ಮೆ ಪ್ರೊಪೋಸ್ ಮಾಡಿದಾಗ ನೀನು ಒಲ್ಲೆ ಎಂದಿದ್ದೆ, ಅದಕ್ಕಾಗಿ ನಿನ್ನ ಮನಸ್ಸಲ್ಲಿ ಏನಿದೆ ಎಂದು ತಿಳಿಯುವ ಕುತೂಹಲದಲ್ಲೇ ನಾನು ಆ ಹುಡುಗಾಟ ಆಡಿದ್ದು
ಆದರೆ ಅದು ನಿನ್ನನ್ನು ನನ್ನಿಂದ ತುಂಬಾ ದೂರ ಕೊಂಡು ಹೋಗುತ್ತದೆ ಎಂದು ಕೊಂಡಿರಲಿಲ್ಲ.

ನಾನು ಪ್ರೇಮಿಗಳ ದಿನದಂದು ನೀನು ನನ್ನನ್ನು ನಾನಾಗಿಯೇ ಅಂದರೆ ಸ್ನೇಹಳನ್ನು ಸ್ವೀಕರಿಸುತ್ತಿ ಅಂದುಕೊಂಡಿದ್ದೆ, ಆದರೆ ನಾನು ಸ್ನೇಹ ಆಗಿರುವಾಗ ನೀನು ಅಂದೂ "ನನ್ನಲ್ಲಿ ಪ್ರೀತಿ ಇಲ್ಲ.." ಅಂದೆ, ಬೇಜಾರಾಯಿತು, ಗೆಳತಿ ಶ್ರಾವಣಿ ನನ್ನನ್ನು ಸ್ವೀಕರಿಸು ಅಪರಿಚಿತ ಸಹನಳನ್ನು ಮರೆ ಅಂದಾಗಲು ನೀನು ನಿನ್ನ ನಿರ್ಧಾರ ಬದಲಿಸಲಿಲ್ಲ, ಆದುದರಿಂದ ನಾನು ಅಂದು ನಿನ್ನಲ್ಲಿ ನನ್ನ(ಸಹನಳ) ನಿಜವಾದ ಅಸ್ತಿತ್ವ ಮನವರಿಕೆ ಮಾಡುವುದು ಬೇಡ ಎಂದೆನಿಸಿತು, ಅಂದು ಒಂದು ಚುರಾದರು ನೀನು ನನ್ನ(ಸ್ನೇಹಳ ) ಬಗ್ಗೆ ಕನಿಕರ ಪಡಲಿಲ್ಲ, ನೀನು ಅದೇ ಸಹನಾಳ ಗುಂಗಲ್ಲಿದ್ದದ್ದು ನನ್ನ ಗಮನಕ್ಕೆ ಬಂತು.

ಅದಕ್ಕಾಗಿಯೇ ನಾನು ನಿನಗೆ ಮೆಸ್ಸೇಜ್ ಕಳುಹಿಸುವುದನ್ನು ವಿವಿಧ ಕಾರಣ ನೀಡಿ ನಿಲ್ಲಿಸಿಬಿಟ್ಟೆ, ಆದರೆ ನೀನು ಶ್ರಾವಣಿಯ ಮೋಬಾಯಿಲ್ ಗೆ ಮೆಸ್ಸೇಜ್ ಕಳುಹಿಸುತ್ತ ಇದ್ದೆ, ಇತ್ತ ಶ್ರಾವಣಿ ಎಲ್ಲದಕ್ಕೂ ಮೂಕ ಸಾಕ್ಷಿಯಾಗಿದ್ದಳು.ನಾನು (ಸ್ನೇಹ) ಆಗಿ ನಿನಗೆ ನನ್ನ ಮೊಬೈಲ್ ನಿಂದ ಮೆಸ್ಸೇಜ್ ಮಾಡಲು ತೊಡಗಿದೆ, ನೀನು ನನ್ನಲ್ಲಿ ಇಗಲೂ ಅದೇ ತಾತ್ಸಾರ ಭಾವ ಮುಂದುವರೆಸಿದ್ದೆ, ಆದರೆ ದಿನ ಕಳೆದಂತೆ ನನಗೆ ನಿನ್ನಲ್ಲಿ ಸಹನಾಳ ಬಗೆಗಿನ ಅನುಕಂಪ ಕಮ್ಮಿ ಅದಂತೆ ಭಾಸ ವಾಗುತಿತ್ತು, ಆದರೂ  ನೀನು ನನಗೆ ಹತ್ತಿರ ವಾಗಲು ಮುಜುಗರ ತೋರಿಸುತಿದ್ದೆ. ಎಲ್ಲಾ ಹೇಳಿದರೆ ನೀನು ನನ್ನನ್ನು ಸ್ವೀಕರಿಸಿದರು ಸ್ವೀಕರಿಸಬಹುದು ಎಂದು ಇಲ್ಲಿ ಎಲ್ಲಾ ವಿಚಾರ ಬರೆದಿದ್ದೇನೆ.

ನಿನ್ನಲ್ಲಿ ಈ ಎಲ್ಲಾ ವಿಚಾರ ಹೇಳುವಷ್ಟು ಧೈರ್ಯ ಇಲ್ಲ, ಆದಕಾರಣ ಪತ್ರ ಬರೆದು ಶ್ರಾವಾಣಿಯಲ್ಲಿ ಒಪ್ಪಿಸಿದ್ದೇನೆ, ನನ್ನ ಮೊಬೈಲ್ ನಿಂದ ನಿನಗೆ ಮೆಸ್ಸೇಜ್ ಮಾಡಿದರೆ ನೀನು ನಮ್ಮ ಬೇಟಿಗೆ ಒಪ್ಪುವುದಿಲ್ಲ ಅಂತ ಗೊತ್ತು ಅದಕ್ಕಾಗಿಯೇ ಶ್ರಾವಣಿಯ ಮೊಬೈಲ್ ನಲ್ಲಿ ನಾನು ನಿನಗೆ ಮೆಸ್ಸೇಜ್ ಕಳುಹಿಸಿದ್ದು, ಆಗಲಾದರೂ ನೀನು ನಿನ್ನ ಕಲ್ಪನೆಯ ಸಹನಾಳನ್ನು ನೋಡಲು ಬಂದೇ ಬರುತ್ತಿಯಾ ಸಹನಾ ಕೊಟ್ಟ ಈ ಪತ್ರ ಓದೇ ಓದುತ್ತಿಯಾ ಅಂತ ನನಗೆ ಗೊತ್ತು.

ಈ ಪತ್ರ ಓದಿದ ಬಳಿಕ ಅಸಲಿನ ಸಹನಾಳನ್ನು ಅಂದರೆ ನಿನ್ನ ಅತ್ತೆ ಮಗಳು ಸ್ನೇಹಳನ್ನು ಪ್ರೀತಿಸುತ್ತೀಯ ಎಂದು ನಂಬಿದ್ದೇನೆ.ನಿನ್ನ ಮುಗುಳ್ನಗೆ ತುಂಬಿದ ನಗುವಿನೊಂದಿಗೆ ನನ್ನನ್ನು ಸ್ವೀಕರಿಸುತ್ತಿಯಾ ಎಂದು ನಂಬಿರುವ

ನಿನ್ನ ಸ್ನೇಹ (ಸಹನಾ)

*********
ಅಬ್ಬಾ ಎಂಥಹ ಹುಡುಗಿ ಈ ಶ್ರಾವಣಿ, ತನ್ನ ಗೆಳತಿಗೆ ಕೊಟ್ಟ ಮಾತು ಉಳಿಸಲು ತನ್ನ ಪ್ರಿಯಕರನಿಗೆ ಗೊತ್ತಿಲ್ಲದಂತೆ ಮೋಸಮಾಡಿ, ಗೆಳೆತನಕ್ಕೆ ಜೈಕಾರ ಹಾಹುವ ಬಯಕೆ!!! ಎಂದೆನಿಸಿತು. ಈಗ ನನ್ನಲ್ಲಿ ನನ್ನ ಪ್ರೇಮ ಕಥೆಯ ಎರಡೂ ಮುಖ ತಿಳಿದಂತಾಯಿತು, ಎರಡೂ ಓದಿದ ಕಾರಣ ನನಗೆ ಶ್ರಾವಣಿ ಮಾಡಿದ ತಪ್ಪಾದರೂ ಏನು ಎಂದೆನಿಸಿತು. ಯಾವುದೇ ತಪ್ಪಿರಲಿಲ್ಲ ಆ ನನ್ನ ಸಹನಾ/ಶ್ರಾವಣಿಯದ್ದು  !!!

ನಾನು ನಿನ್ನೆ ಬೇಟಿ ಆಗದ್ದು ಒಳ್ಳೇದೆ ಆಯಿತು. ಹೋಗಿದ್ದರೆ ಆ ಶ್ರಾವಣಿ ನನ್ನಲ್ಲಿ ಈ ಪತ್ರ ಕೊಡುತಿದ್ದಳು, ನಾನು ಅವಳು ಬರೆದ ಕಥೆ ನಿಜವೆಂದು ಮೆಲ್ಲನೆ ಸ್ನೇಹಳ ಪ್ರೀತಿಯಲ್ಲಿ ಜಾರುತಿದ್ದೆ, ಆಗ ಈ ಶ್ರಾವಣಿಯ ತ್ಯಾಗದ ಕಥೆ ಈಚೆಗೆ ಬರುತ್ತಿರಲೇ ಇಲ್ಲ, ನಾ ಹೋಗದೆ ಇದ್ದ ಕಾರಣ ಅವಳು ಅವಸರದಲ್ಲಿ ಡೈರಿ ಬಿಟ್ಟು ಹೋದಳು. ಅದೃಷ್ಟ ನನ್ನ ಜೊತೆಗಿತ್ತು, ಅವಳ ಪ್ರೇಮದ ಎಲ್ಲಾ ಮಜಲು ನನಗೆ ತಿಳಿಸಿ ನನ್ನಿಂದ ದೂರವಾದಳು.

ಎಲ್ಲಾ ಓದಿದ ನನಗೆ ಅವಳಲ್ಲಿ ಇನ್ನೂ ಪ್ರೀತಿ ಹೆಚ್ಚಿತು. ಅವಳನ್ನು ಹೇಗಾದರೂ ಹುಡುಕಬೇಕು ಎಂದು ಸ್ನೇಹಾಳಿಗೆ ಫೋನ್ ಆಯಿಸಿದೆ ಅವಳು "ಅವಳು ಎರ್ನಾಕುಲಂ ಗೆ ಹೋಗಿದ್ದಾಳೆ ಆದರೆ ಅಲ್ಲಿ ತಲುಪಿದ ನಂತರ ಫೋನ್ ನಂಬರ್ ಕೊಡುತ್ತೇನೆ ಅಂದಿದ್ದಳು ಈಗ ತಲುಪಿರಬಹುದು ಆದರೆ ಇಲ್ಲಿವರೆಗೆ ಅವಳ ಫೋನ್ ಬರಲಿಲ್ಲ, ಆದರೆ ಅವಳಬಗ್ಗೆ ನೀನು ಯಾಕೆ ವಿಚಾರಿಸುತ್ತಿ ?"ಅಂದಳು.
ಈಗ ಯಾರಿಗೆ ಕೇಳಲಿ...? ನನಗವಳನ್ನು ಎಷ್ಟೇ ಕಷ್ಟವಾದರೂ ಪಡೆಯಬೇಕು ಎಂಬ ಹಂಬಲ ಹೆಚ್ಚಾಯಿತು.

ಸೋಮವಾರ ದೊಳಗೆ ಎಲ್ಲಾ ಓದಿ ಮುಗಿಸಿದ್ದೆ ನನ್ನ ಪ್ರಿಯತಮೆಯ ಅಂತರಾಳ, ಮಂಗಳೂರಿಗೆ ಹೋಗಿ ದಾಮೋದರ್ ರವರಿಗೆ ಫೋನ್ ಮಾಡಿದೆ. ಅವರು ತಮ್ಮ ಸ್ಟಾಂಡ್ ಗೆ ಬರುವಂತೆ ನನ್ನಲ್ಲಿ ಹೇಳಿದರು, ನಾನು ಅಲ್ಲಿ ಹೋಗಿ ಅವರೊಂದಿಗೆ ಪಕ್ಕದ ಹೋಟೆಲ್ ನಲ್ಲಿ ಕಾಫೀ ಸವೆಯುತ್ತಾ ಈ ಒಂದು ದಿನದಲ್ಲಿ ಆದ ನನ್ನ ಎಲ್ಲಾ ಅನುಭವ ಹೇಳಿದೆ, ಅವಳನ್ನು ಭೇಟಿ ಮಾಡುವ ಹಂಬಲವನ್ನೂ ವ್ಯಕ್ತ ಪಡಿಸಿದೆ.ಆದರೆ ಅವರೇನು ಮಾಡಿಯಾರು ಅವಳು ನಮ್ಮನ್ನೆಲ್ಲ ಬಿಟ್ಟು ದೂರವಾಗಿದ್ದಳು.
ಅವಳನ್ನು ಹುಡುಕುವ ಸಲುವಾಗಿ ಸೆಮೆಸ್ಟರ್ ಮುಗಿದ ಬಳಿಕ ಎರ್ನಾಕುಳಂಗೆ ಹೋಗಿ ಅಲ್ಲಿನ ಯುನಿವೆರ್ಸಿಟಿ, ಕೊಲ್ಲೆಜ್ ಅಲೆದದ್ದು ಆಯಿತು. ಅಲ್ಲೂ ಸೆಮೆಸ್ಟರ್ ವಕೆಶನ್ ಅದ್ದರಿಂದ ಒಬ್ಬ ವಿಧ್ಯಾರ್ಥಿಯೊಂದಿಗೂ ನೇರ ಮಾತುಕತೆ ಮಾಡಲು ಸಾದ್ಯವಿರಲಿಲ್ಲ. ಮೇಲಾಗಿ ಯಾವುದೇ ಯುನಿವೆರ್ಸಿಟಿಯಲ್ಲಿ ಶ್ರಾವಣಿ ಹೆಸರಿನ ಯಾವುದೇ ಒಂದು ತಲೆಯು ಸಿಗಲಿಲ್ಲ. ಮತ್ತೆ ಮಂಗಳೂರು ಸೇರಿದ ಬಳಿಕ ನನ್ನ ಕೈಯಲ್ಲಿದ್ದ ಡೈರಿಯನ್ನು ದಾಮೋದರ್ ರಿಗೆ ಹಿಂತಿರುಗಿಸಿದೆ.
ಪ್ರತಿ ದಿನ ಅವಳ ನೆನಪಾಗುತಿತ್ತು, ಒಮ್ಮೆ ನೋಡಿ ದ ಅವಳ ಚಹರೆ ನೆನಪಿನಲ್ಲಿ ಅಚ್ಚಾಗುವ ಮುಂಚೆಯೇ ಅವಳು ನನ್ನನ್ನು ಬಿಟ್ಟು ದೂರ ಹೋಗಿದ್ದಳು. ಆ ಅಸ್ಪಷ್ಟ ಚಹರೆಯನ್ನು ನಾನು ಪೂರ್ಣವಾಗಿ ಚಿತ್ರಿಸಲು ಬಯಸುತಿದ್ದೆ. ಆದರೆ ಅದೃಷ್ಟ ಒಂದು ನನ್ನ ಜೊತೆಗಿರಲಿಲ್ಲ. ಎಲ್ಲ ಕನಸಲ್ಲೇ ಉಳಿದು ಹೋಯಿತು ಮನಸಲ್ಲಿ ಮರೆ ಯಾಗುತ್ತ ಹೋಗುತಿತ್ತು.

***********

Saturday, March 3, 2012

ಡೈರಿ : ಪುಟ ೪







ಪುಟ೪

ಫೆಬ್ರವರಿ 14
ವಿಶ್ವದಲ್ಲೆಲ್ಲ ಪ್ರೇಮಿಗಳ ದಿನದ ಆಚರಣೆ ಜೋರಾಗಿಯೇ ಇತ್ತು. ನನಗೆ ಅವನನ್ನು ಕಳಕೊಳ್ಳಬೇಕಾದ ಅನಿವಾರ್ಯತೆ !!!
ಸ್ನೇಹ ಅವನನ್ನು ಭೇಟಿ ಆಗುವ ಹುಮ್ಮಸ್ಸಿನಲ್ಲಿದ್ದಳು, ನಾನು ಅವಳಿಗೆ ನೀನು ಇಂದೇ ಅವನಿಗೆ ಪ್ರೊಪೋಸ್ ಮಾಡು, ಅವನು ಒಪ್ಪುವಾ, ಮತ್ತೆ ನಿನ್ನ ಚಿಂತೆ ಎಲ್ಲಾ ತೀರುತ್ತದೆ ಎಂದು ಅವಳಿಗೆ ಹೇಳಿದೆ, ಅವಳು ಅದಕ್ಕೆ ಸಮ್ಮತಿಸಿದಳು. ನಾನು ಅವಳು ಸೇರಿ ಇಡಿ ಮಂಗಳೂರು ಸುತ್ತಿ ಅವನಿಗಾಗಿ ಒಂದು ಚಂದದ ಉಡುಗೊರೆ ಖರೀದಿಸಿದೆವು, ಅವನಿಗೆ ಐದು ಗಂಟೆಗೆ ಬರಲು ಹೇಳಿದ್ದಳು ಆದರೆ ಮೂರಕ್ಕೆ ಅವಳು ಪಬ್ಬಾಸ್ಗೆ ಹೋಗುವ ಅಂತ ನನ್ನಲ್ಲಿ ಒಂದು ಗಂಟೆಗೆ ಒತ್ತಾಯ ಶುರು ಮಾಡಿದ್ದಳು.ನನಗೂ ಅವನನ್ನು ಒಮ್ಮೆ ನೋಡಬೇಕು ಎಂಬ ಹಂಬಲ.

ಆದರೆ ಅವಳ ತಯಾರಿ ಆಗುತ್ತಲೇ 4 :30 ದಾಟಿತ್ತು , 5 ಗಂಟೆಗೆ ನಾವು ಪಬ್ಬಾಸ್ತಲುಪಿದೆವು.ಅವನು ಇನ್ನೂ ತಲುಪಿರಲಿಲ್ಲ. ಅವಳು ಇನ್ನೊಮ್ಮೆ ಕಾಲ್ ಮಾಡಿ ಕೇಳುವಾಗ ಇನ್ನೂ 5 ನಿಮಿಷದಲ್ಲಿ ಸ್ಥಳಕ್ಕೆ ತಲುಪುತ್ತೇನೆ ಅಂತ ಹೇಳಿದ. ಅವಳಲ್ಲಿ ಒಂದು ಬಗೆಯ ಗೊಂದಲ.
ನನ್ನಲ್ಲಿ ಅವಳು "ಶ್ರಾವಣಿ ಬೇಡ ಕಣೇ ಪ್ರೊಪೋಸ್ ಮಾಡುವುದು, ಅವ ಕೋಪಿಸಿಕೊಂಡರೆ ಈಗಿರುವ ಸಂಭಂದವು ಕೆಟ್ಟುಹೋಗುವುದು"ಅಂದಳು.
ನಾನು ಅವಳಿಗೆ "ಹಾಗೇನು ಆಗುವುದಿಲ್ಲ, ಅವನಿಗೂ ನಿನ್ನಲ್ಲಿ ಪ್ರೀತಿ ಮೂಡಿರಬಹುದು, ನಿನ್ನೆ ಏನೋ ವಿಚಾರ ನಿನ್ನಲ್ಲಿ ಹೇಳುವುದು ಇದೆ ಅಂದನಲ್ಲ ಅದು ಈ ವಿಚಾರ ಆಗಿದ್ದರೂ ಆಗಿರಬಹುದು" ಅಂದೆ ಮನಸ್ಸು ಅವನನ್ನು ಕಳಕೊಳ್ಳಬೇಕಲ್ಲ ಅಂತ ಕೂಗುತಲಿತ್ತು.
ನಾನಂದ ಮಾತಿಗೆ ಅವಳು ಇನ್ನೊಮ್ಮೆ ಸಂಭ್ರಮಿಸಿದಳು.
ಅವಳು "ಅವ ಬೇಡ ಎಂದರೆ ಅವನಿಗೆ convince ಮಾಡ್ತಿಯಲ್ಲ ನೀನು ... promise ...ಅವನಿಲ್ಲದೆ ನಾ ಬದುಕಲಾರೆ "ಎನ್ನುತ್ತಾ ಕೈ ಮುಂದೆ ಹಿಡಿದಳು
ಒಳಮನಸ್ಸು ಅವಳ ಕೈಗೆ ಕೈ ಜೋಡಿಸು ಎನ್ನುತಿತ್ತು, ಆದರೆ ಅವನ ಧ್ಯಾನದಲ್ಲಿದ್ದ ನನ್ನ ಹೃದಯ ಗೆಳತಿಗಾಗಿ ಕಟ್ಟಿದ ಪ್ರೇಮ ಗೋಪುರ ನೀನು ಕೈಯಾರೆ ಕೆಡವುತ್ತಿಯಾ ಎಂದು ಪ್ರಶ್ನಿಸುತ್ತಿತ್ತು .ನಾನು ಮನಸ್ಸಿನ ಮಾತನ್ನು ಕೇಳಿದೆ, ಸ್ನೇಹಳಂತೆ ನನ್ನನ್ನು ಪ್ರೀತಿಸಲು ಆಗದು , ಅವನನ್ನು ಅವಳು ಚೆನ್ನಾಗಿ ನೋಡಿಕೊಳ್ಳುವುದರಲ್ಲಿ ಯಾವುದೇ ಸಂಶಯವಿರಲಿಲ್ಲ.

ನಾನು ಕೈ ತೆಗೆದು ಅವಳ ಕೈಮೇಲೆ ಇಡುತಿದ್ದಂತೆ ಬಾಗಿಲು ತೆರೆದು ಅವನು ಒಳ ಬಂದ.ಇಪ್ಪತ್ತರ ನವತರುಣ.ಆಗತಾನೆ ಮೂಡಿದ ಮೀಸೆ, ಸಣ್ಣಗಿನ ಕೂದಲು,ಇಂದಿನವರಂತೆ ಅವ ಲೋ ಜೀನ್ಸ್ ಹಾಕಿರಲಿಲ್ಲ ಬದಲಿಗೆ ಒಂದು ಸಭ್ಯ ಉಡುಪನ್ನೇ ಹಾಕಿ ಕೊಂಡಿದ್ದ.ಸ್ನೇಹ ಅವನನ್ನು ನೋಡಿ ಹಾಯ್ ಅಂದಳು.ನಾನು ಅವನಿಗೆ ಒಂದು ಮುಗುಳ್ನಗೆ ಕೊಟ್ಟೆ.
ಆಗ ಅವನ ಗಲ್ಲದಲ್ಲಿ ಮೂಡಿದ ಆ ಗುಳಿ !!!. ಅವನ ಆ ಗುಳಿಗಲ್ಲ ಎಂತಹ ಹುಡುಗಿಯನ್ನು ಸೆಳೆಯುವಂತಿದ್ದವು, ನನ್ನ ಒಳಮನಸ್ಸು ಅವನೆಡೆಗೆ ಆಕರ್ಷಿತಳಾಗಬೇಡಎಂದು ಎಚ್ಚರಿಸಿತು.

ಸ್ನೇಹ ಅವನಲ್ಲಿ "ಇವಳು ಶ್ರಾವಣಿ ಅಂತ, ನನ್ನ ಬೆಸ್ಟ್ ಫ್ರೆಂಡ್ "ಅಂತ ನನ್ನನು ಪರಿಚಯಿಸಿದಳು,
ಅವನು ಅದಕ್ಕೆ ಪ್ರತಿಯಾಗಿ ಇನ್ನೊಮ್ಮೆ ಆ ಗುಳಿ ತುಂಬಿದ ಮಂದಹಾಸ ನೀಡಿದ. ಕೈ ಮುಂದೆ ಚಾಚಿದ. ಅವನನ್ನು ಸ್ಪರ್ಶಿಸುವ ಮನಸ್ಸಾಗುತ್ತಿತ್ತು, ಆದರೆ ನಿನ್ನೆ ರಾತ್ರಿ ಮಾಡಿದ ನಿರ್ಧಾರ ನನ್ನ ಕೈಯನ್ನು ಜೋಡಿಸಿ ಅವನಿಗೆ ವಂದನೆ ಸಲ್ಲಿಸುವಂತೆ ಮಾಡಿತು.
ಅವನು "ನೀನೇನೋ ಅನ್ನಬೇಕೆಂದಿಯಲ್ಲ ಸ್ನೇಹ  ಹೇಳು ...ಬಳಿಕ ನಾನಂದುಕೊಂಡ ವಿಚಾರ ಹೇಳುತ್ತೇನೆ "ಅಂದ
 
ನನಗೆ ಇವರಿಬ್ಬರು ತಮ್ಮ ಪ್ರಣಯ ಪಯಣ ಇಷ್ಟುಬೇಗ ಶುರು ಮಾಡುವುದು ಬೇಡ ಎಂದೆನಿಸಿ, ಐದು ನಿಮಿಷಕ್ಕಾದರೂ ನಾನು ಅವರನ್ನು ತಡೆಯುವ ಅಂತ "ಆರ್ಡರ್ ಕೊಡೊಣ ಮತ್ತೆ ಮುಂದುವರಿಸಿದರಾಯಿತು ..."ಅಂದೆ
ಅವನು ನನ್ನಲ್ಲಿ "ಸರಿ ಶ್ರಾವಣಿ ,ನಿನ್ನ ಗೆಳತಿಯ ಇಷ್ಟ ನನ್ನಗಿಂತ ನಿನಗೆ ಹೆಚ್ಚು ತಿಳಿದಿರಬಹುದು ನೀನು ಆರ್ಡರ್ ಮಾಡು " ಅಂದ, ಅವ್ವು ಅವ ನನ್ನಲ್ಲಿ ಆಡಿದ ಮೊದಲ ಮಾತಾಗಿತ್ತು , ಫೋನ್ ನಲ್ಲಿ ಹಿಂದೆ ಮಾತಾಡಿದಾಗ ಇಂತಃ ಮುಗ್ದತೆಯ ಪರಿಚಯವಾಗಿರಲಿಲ್ಲ, ಆದರೆ ಇವತ್ತು ಅನುಭವವಾಗಿತ್ತು.
ನಾನು "ಸರಿ .... ಅಣ್ಣ ಮೆನು ತಕೊಂಡು ಬಾ "ಅಂತ ಪ್ರೇಮಿಗಳ ನಡುವಲ್ಲಿ ಬ್ಯುಸಿಯಾಗಿರುವ ವೈಟರ್ ಒಬ್ಬನಿಗೆ ಹೇಳಿದೆ.
ನನ್ನ ಪಕ್ಕದಲ್ಲಿ ಸ್ನೇಹ ಕುಳಿತಿದ್ದಳು, ಅವಳ ಎದುರಿಗೆ ಅವನು ಕುಳಿತುಕೊಂಡಿದ್ದ, ಅವನು "ನೀನು ಹೇಳು ..."ಎಂದ ಸ್ನೇಹಳಿಗೆ.

ಅವಳು ನನ್ನ ಕೈಯಲ್ಲಿದ್ದ ಗಿಫ್ಟ್ ತೆಗೆದು ಟೇಬಲ್ ಮೇಲೆ ಇಟ್ಟು"ಇದು ನಿನಗಾಗಿ ನನ್ನ ಸಣ್ಣದೊಂದು ಕಾಣಿಕೆ "ಅಂದಳು
ಅವನು "ನಿನ್ನ ಬರ್ತ್ಡೇ ಗೆ ನಾನು ಉಡುಗೊರೆ ಕೊಡಬೇಕಾದುದ್ದು ಆದರೆ ನೀನು ಉಡುಗೊರೆ ಕೊಡುತ್ತ ಇದ್ದೀಯ... ಏನು ವಿಚಾರ...?"
ಸ್ನೇಹ "ನನ್ನ ಬರ್ತ್ಡೇ ನಿನ್ನೆ ಇದ್ದದ್ದು, ಈ ಉಡುಗೊರೆ ಈ ದಿನದ ವಿಶೇಷತೆ, ಪ್ರೇಮಿಗಳ ದಿನದ ಉಡುಗೊರೆ !!!"

ಅವನಲ್ಲಿ ಒಂದು ಮೌನ ಮೂಡಿತು.

ಸ್ನೇಹ ಮುಂದುವರೆಸಿದಳು "ನನಗೆ ನೀನೆಂದರೆ ತುಂಬಾ ಇಷ್ಟ, ಸಣ್ಣಾಗಿಂದ ನಿನ್ನೊಡನೆ ಕಂಡ ಕನಸು ನನಸಾಗಬೆಂಬ ಆಶೆ ... ಇಲ್ಲ ಅನ್ನ ಬೇಡ ..."
ಅವನಿನ್ನೂ ಮೌನಿಯಾಗಿದ್ದ, ವೈಟರ್ ನಾನು ಆರ್ಡರ್ ಐಸ್ ಕ್ರೀಂ ತಂದು ಮೇಜಿನ ಮೇಲೆ ಇಟ್ಟ, ನಾನು "ಐಸ್ ಕ್ರೀಮ್ "ಅಂದೆ. ಇದು ಇಬ್ಬರಿಗೂ ಕೇಳಲಿಲ್ಲ. ಅವರು ಅವರ ಮಾತಿನಲ್ಲಿ ಮುಳುಗಿದ್ದರು.

ಸ್ನೇಹ "ನಿನ್ನ ಮನಸಲ್ಲಿ ಏನಿದೆ ಎಂದು ಹೇಳು .."ಅಂದಳು
ಅವನು "ಸ್ನೇಹಾ ನನಗೆ ನಿನ್ನಲ್ಲಿ ಅತ್ತೆ ಮಗಳೆಂಬ ಸೆಳೆತವಿದೆ ಹೊರತು ನನ್ನ ಪ್ರೇಮಿಯಾಗ ಬೇಕೆಂಬ ವಿಚಾರ ಇಲ್ಲಿ ವರೆಗೆ ಬಂದೇ ಇಲ್ಲ , ನಾವಿಬ್ಬರು ಹೀಗೆ ಇರೋಣಾ..."
ಈಗ ಮೌನಿಯಾಗುವ ಸರದಿ ಸ್ನೇಹಳದ್ದು, ಅವಳ ಮೈಯೆಲ್ಲಾ ಕಂಪಿಸುತ್ತಿತ್ತು, ಕೈಯಲ್ಲಿದ್ದ ಸ್ಪೂನ್ ನಡುಗುತಿತ್ತು.ಅವ ಮುಂದುವರಿಸಿದ

"
ನಾನು ನಿನ್ನಲ್ಲಿ ಹೇಳ ಬೇಕೆಂದ ವಿಚಾರ ಹೇಳಿಬಿಡುತ್ತೇನೆ, ನಾನು ಒಬ್ಬ ಸಹನಾ ಎನ್ನುವ ಹುಡುಗಿಯನ್ನು ಪ್ರೀತಿಸುತ್ತಾ ಇದ್ದೇನೆ, ಅವಳು ನನ್ನನ್ನು ಪ್ರೀತಿಸುತ್ತಾ ಇದ್ದಾಳೆ, "
ಮೌನಿಯಾಗಿದ್ದ ಸ್ನೇಹ ಒಮ್ಮೆಲೇ "ಯಾರು ಆ ಸಹನಾ ..? ನನ್ನ ಸವತಿ ...?"ಅಂತ ಕಿರುಚಿದಳು.
ನಾನು ಅವಳನ್ನು ಸಮಾಧಾನಿಸುತ್ತಾ "ಮನೆ ಅಲ್ಲ ಕಣೆ ಇದು. ಕಂಟ್ರೋಲ್ .... "ಅಂದೆ
ಅವನು "ಅವಳ್ಯಾರೋ ಅಂತ ನನಗಿನ್ನೂ ಗೊತ್ತಿಲ್ಲ ... ನಿಜ ಹೇಳಬೇಕೆಂದರೆ ಇನ್ನೂ ನೋಡದ ಮುಖವನ್ನು ನಾನು ಪ್ರೀತಿಸುತ್ತಾ ಇದ್ದೇನೆ " ಅಂದ.

ನಾನು ಮೌನಿ ಆದೆ.
ಅವ ನನ್ನ ಬಗ್ಗೆ ಮಾತಾಡುತಿದ್ದದ್ದು .ಇಲ್ಲಿ ಸ್ನೇಹ ಪೂರ್ತಿ ಹತಾಶೆಯಲ್ಲಿ "ಹಂಗಾದ್ರೆ ನೀನು ಅವಳನ್ನೇ ಮದುವೆ ಆಗು , ನಾನು ಲೈಫ್ ಲಾಂಗ್ ನಿನ್ನ ನೆನಪಲ್ಲೇ ಸನ್ಯಾಸಿ ಆಗಿರುತ್ತೇನೆ, ಅವಳು ಒಂದು ವೇಳೆ ಸತ್ತರೆ ನಿನ್ನ ಎರಡನೇ ಹೆಂಡತಿಯಾಗಿ ಬರಲು ನಾನು ಸಿದ್ದ , ನನ್ನ ಆಗಲಾದರೂ ಸ್ವಿಕರಿಸುತ್ತಿಯಾ ...?" ಅಂದಳು.

ಅವನು "ಅರೆ ಸ್ನೇಹ ನೀನ್ಯಾಕೆ ಈ ಹುಚ್ಚು ನಿರ್ಧಾರ ತಕೊಳ್ಳುತಿದ್ದಿಯ ...?ನಿನಗೆ ನನಗಿಂತ ಒಳ್ಳೆ ಹುಡುಗ ಸಿಗುತ್ತಾನೆ... ನಾನೇ ನಿಂತು ನಿನ್ನ ಮದುವೆ ಮಾಡಿಸುತ್ತೇನೆ .."ಅಂದ

ಇಲ್ಲಿ ಅವಳ ಮಾತು ಕೆಳುತಿದ್ದಂತೆ ಅವಳಿಗೆ ಅವನಲ್ಲಿರುವ ಪ್ರೀತಿ ನನಗರ್ಥವಾಯಿತು, ಮೌನ ವಾಗಿದ್ದ ನಾನು ಇನ್ನೂ ಮೌನವಾಗಿರುವುದು ಸರಿಯಲ್ಲ.ಎಲ್ಲ ವಿಚಾರ ಹೇಳಿ ಬಿಡುತ್ತೇನೆ ಅಂದುಕೊಂಡೆ ಆದರೆ ಹೇಗೆ ಹೇಳುವುದು ತಿಳಿಯಲಿಲ್ಲ.
ಅವನ ಕಲ್ಪನೆಯ ಪ್ರೇಮಿ ಅವನ ಕಲ್ಪನೆಯಲ್ಲೇ ಇರಲಿ ಎಂದು ನಾನು ಅವನಲ್ಲಿ "ನಿನ್ನನ್ನು ಇವಳು ತುಂಬಾ ಇಷ್ಟ ಪಡುತ್ತಾಳೆ, ಇವಳನ್ನೇ ಮದುವೆ ಆಗಿ, ಗೊತ್ತಿಲ್ಲದ ,ಇನ್ನೂ ನೋಡಿರದ ಅದ್ಯಾವುದೋ ಸಹನಾಳಿಗೆ ಮನ ಸೋಲುವ ಬದಲು ಇವಳನ್ನು ಇಷ್ಟಪಡಿ , ನಾವು ನಮ್ಮನ್ನು ಇಷ್ಟ ಪಟ್ಟವರನ್ನು ಖುಷಿ ಯಲ್ಲಿಡುವುದು,ನಾವು ಇಷ್ಟ ಪಡುವವರನ್ನು ಖುಷಿಯಲ್ಲಿ ಇಡುವುದಕ್ಕಿಂತ ಹೆಚ್ಚು ಸೂಕ್ತ, ಅವಳನ್ನು ಮರೆತು ಬಿಡಿ, ಅವಳು ನಿಮ್ಮನ್ನು ದಿನ ಕಳೆದಂತೆ ಮರೆತು ಬಿಡುತ್ತಾಳೆ"ಅಂದೆ.
ಅವನು ಆಗಲೇ ಸಹನಳ  ಪ್ರೀತಿಯಲ್ಲಿ ಸಂಪೂರ್ಣ ಮುಳುಗಿದ್ದ ಅವನಿಗೆ ಈ ಶ್ರಾವಣಿಯ ಮಾತು ಕೇಳುತಿರಲಿಲ್ಲ.

ಮೂವರು ಮೌನಿ ಯಾಗಿದ್ದೆವು. ಐಸ್ ಕ್ರೀಮ್ ಇನ್ನು ಕೆಳಗಿಳಿಯಲಿಲ್ಲ. ಅಲ್ಲಿಂದ ಹೊರಡುವುದು ನಮ್ಮ ಮೂವರಿಗೂ ಸೂಕ್ತ ಎಂದನಿಸಿತು, ಮೂವರು ಎದ್ದೆವು, ನನ್ನಲಿ ಅವನು ಬದಿಗೆ ಕರೆಯಿಸಿ
"
ನಿನ್ನ ಗೆಳತಿಯಬಗ್ಗೆ ಜಾಗ್ರತೆ ವಹಿಸು, ನಾನು ಹೀಗೆ ಮಾತಾಡ ಬಾರದಿತ್ತು ಆದರೆ ನನ್ನ ಮನಸ್ಸಲ್ಲಿರುವುದು ಅವಳಿಗೆ ತಿಳಿಸುವುದು ಅನಿವಾರ್ಯ ವಾದ ಕಾರಣ ಹೇಳಿದೆ.ಬೇರೆ ವಿಷಯದ ಬಗ್ಗೆ ಅವಳಲ್ಲಿ ಮಾತಾಡಿ... ನನ್ನ ಮರೆಯುವಂತೆ ಹೇಳಿ" ಅಂದ.

ರೂಮಿಗೆತಲುಪಿದಂತೆನನಗೆ ನಾನು ಮಾಡಿದ್ದು ಅದೆಷ್ಟು ದೊಡ್ಡ ತಪ್ಪು ಎಂದು ಇವತ್ತು ಮನವರಿಕೆ ಆಯಿತು, ಇನ್ನೂ ಮುಂದೆ ನಾನು ಮೇಲಾನೆ ಅವನಿಂದ ದೂರ ಹೋಗುವೆ, ಮರೆಯಲು ಪ್ರಯತ್ನಿಸುತ್ತೇನೆ ಅಂತ ನಿರ್ಧಾರ ತೆಗೆದು ಕೊಂಡೆ, ಇಲ್ಲಿ ಸ್ನೇಹ ಆಕಾಶವೇ ಕಳಚಿ ಬಿದ್ದಂತೆ ಆಡುತಿದ್ದಳು, ನಾನು ನನ್ನ ಮುಂದಿನ ಚಿಂತೆಯಲ್ಲಿದ್ದರೆ ಅವಳು ಬಿಕ್ಕಿ ಬಿಕ್ಕಿ ಅಳುತಿದ್ದಳು, ಅರ್ದ ಗಂಟೆಯಲ್ಲಿ ಗೊಳ್ಳೆಂದು ವಾಂತಿ ಮಾಡಿದಳು..

ಅರರೆ ಇವಳು ಜೀವಕ್ಕೆ ಏನಾದರು ಹೆಚ್ಚು ಕಮ್ಮಿ ಮಾಡಿ ಕೊಂಡಳೇ ಎಂಬ ಪ್ರಶ್ನೆ ಮೂಡಿತು, ಅವಳನ್ನು ಪಕ್ಕದಲ್ಲೇ ಇದ್ದ ಆಸ್ಪತ್ರೆಗೆ ಕರಕೊಂಡು ಹೋಗಿ ತೋರಿಸಿದ್ದು ಆಯಿತು ಡಾಕ್ಟರ್ ಅದು ಪಿತ್ತ ಅಂದಾಗ ನನಗೆ ಹೋದ ಜೀವ ಬಂದಂತಾಯಿತು.ಆಸ್ಪತ್ರೆ ಇಂದ ಬರ ಬೇಕಾದರೆ ಅವಳು ನನ್ನಲ್ಲಿ "ನೀನು ನಾನು ಆತ್ಮಹತ್ಯೆಗೆ ಪ್ರಯತ್ನಿಸಿದೆ ಅಂದು ಕೊಂಡಿಯ ...ಇಲ್ಲ ಕಣೆ ... ಹಾಗೆ ಮಾಡಲ್ಲ ... ನನ್ನ ನಂಬಿದ ನನ್ನ ಹೆತ್ತವರಿಗಾಗಿ ನಾನು ಬದುಕಬೇಕು, ಎರಡು ವರುಷ ಹಿಂದೆ ಇದೆ ಕಾರಣಕ್ಕೆ ನಾನು ಆತ್ಮಹತ್ಯೆಗೆ ಪ್ರಯತ್ನ ಪಟ್ಟಾಗ ಅವರು ಅನುಭವಿಸಿದ ಸಂಕಟ ಇನ್ನೂ ನನಗೆ ನೆನಪಿದೆ ...ನಾನು ಅವನನ್ನು ಮರೆತು ಬಿಡುತ್ತೇನೆ, ಅವ ಸಹನಾ ನೊಂದಿಗೆ ಸುಖವಾಗಿರಲಿ ..." ಅಂದಳು
ಅರೆ ತನ್ನ ಪ್ರೀತಿಯನ್ನು ಪ್ರಿಯಕರನಿಗಾಗಿ ತ್ಯಾಗ ಮಾಡುತ್ತಿರುವ ನನ್ನ ಸ್ನೇಹಳನ್ನು ಕಂಡು ನಾ ಕನಿಕರ ಪಟ್ಟೆ, ಇನ್ನೂ ಅವನಲ್ಲಿ ನಾನು ನನ್ನ ಪ್ರೇಮ ವಿಷಯ ತೆರೆಯುವುದಿಲ್ಲ, ಹೀಗೆ  ಸಾಗಲಿ ದಿನ, ಒಂದು ದಿನ ಅವನಿಂದ ದೂರ ಹೋಗುತ್ತೇನೆ, ಇವಳನ್ನು ಇವಳ ಪ್ರಿಯಕರನಿಗೆ ಸೇರಲು ಎಲ್ಲಾ ಪ್ರಯತ್ನ ಮಾಡುತ್ತೇನೆ ....

ಶ್ರಾವಣಿ
**********